¡Sorpréndeme!

01-11-2018: ಗುರುವಾರದ ದಿನ ಭವಿಷ್ಯ | Boldsky

2018-10-31 87 Dailymotion

ಗುರುವಾರದ ಅಧಿಪತಿ ಗುರು ಗ್ರಹ.ಗುರು ಗ್ರಹ ಅಂದರೆ ಗುರು ಬೃಹಸ್ಪತಿಗೆಂದೇ ಸೀಮಿತವಾಗಿರುವ ದಿನವದು .ಬೃಹಸ್ಪತಿಯ ಬಣ್ಣ ಹಳದಿ ಬಣ್ಣ ಹಾಗೂ ಗುರು ಗ್ರಹವನ್ನು ಅದೃಷ್ಟ ಮತ್ತು ಸಂಪತ್ತು ತಂದುಕೊಡುವ ಗ್ರಹ ಎಂದು ನಂಬಲಾಗಿದೆ.ಗುರು ಗ್ರಹ ಯಾವ ವ್ಯಕ್ತಿಯ ಜಾತಕದಲ್ಲಿ ಒಳ್ಳೆಯ ಮನೆಯಲ್ಲಿ ಉಚ್ಚಸ್ಥಾನದಲ್ಲಿ ಸ್ಥಿತನಿದ್ದರೆ ಅವರಿಗೆ ಒಳ್ಳೆಯ ಯೋಗ,ಹಣ ಅಧಿಕಾರ, ಸಂಪತ್ತು,ಉತ್ತಮ ಶಿಕ್ಷಣ,ವೃತ್ತಿ,ಪ್ರಾಮಾಣಿಕ,ಸಂಗಾತಿಯ ಜೊತೆಗೆ ಬುದ್ಧಿವಂತ ಮಕ್ಕಳನ್ನು ಸಹ ಗುರು ಗ್ರಹ ಕರುಣಿಸುವುದು. ಗುರು ಗ್ರಹ ಚಂದ್ರಗ್ರಹ ಜೊತೆಗೆ ಉತ್ತಮವಾಗಿದ್ದರೆ ಗಜಕೇಸರಿ ಯೋಗ
ಬರುವುದು.ಜಾತಕದಲ್ಲಿ ಗುರುಗ್ರಹ ನೀಚನಾಗಿದ್ದರೆ ತೊಂದರೆಗಳನ್ನು ಅನು ಭವಿಸುತ್ತಾನೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ ಇರುವುದೊಂದೇ ಜೀವನ. ಆ ಜೀವನ ಎನ್ನುವುದು ಸಿಗುವುದು ಕೆಲವೇ ದಿನ. ಅದರೊಳಗೆ ತಿಳಿಯದೇ ಕಳೆಯುವ ಬಾಲ್ಯ, ಗೊತ್ತಿಲ್ಲದೆ ಜಾರುವ ಹರೆಯ, ಕರೆಯದೆ ಬರುವ ಮುದಿತನ ಎಲ್ಲವೂ ಅಡಗಿರುತ್ತದೆ. ಈ ಎಲ್ಲಾ ಹಂತದಲ್ಲೂ ಉತ್ತಮವಾದ ವರ್ತನೆ ಹಾಗೂ ಸಾರ್ಥಕ ಎನ್ನುವಂತಹ ಕೆಲಸ ಮಾಡುವುದರ ಮೂಲಕ ಜೀವನವನ್ನು ಅನುಭವಿಸುತ್ತ ಬಾಳುವುದೇ ಬದುಕು. ಹಾಗಾಗಿ ಅಮೂಲ್ಯವಾದ ಬದುಕನ್ನು ದುರುಪಯೋಗಕ್ಕೆ ಬಳಸಿಕೊಳ್ಳದೆ
ಧಾನ-ಧರ್ಮ, ಕರ್ತವ್ಯ, ನಿಷ್ಠೆ, ಪ್ರೀತಿ-ಸ್ನೇಹ ಎನ್ನುವುದರ ಮೂಲಕ ಸುಂದರಗೊಳಿಸಿಕೊಂಡು ಬಾಳಿ ಎನ್ನುವುದೇ ನಮ್ಮ ಆಶಯ. ಗುರುವಾರವಾದ ಇಂದು ಹಲವರ ಬದುಕಲ್ಲಿ ಅದೃಷ್ಟವನ್ನು ಹಾಗೂ ಕೆಲವರ ಬದುಕಲ್ಲಿ ಕಷ್ಟವನ್ನು ತಂದೊಡ್ಡಬಹುದು. ಯಾವುದಕ್ಕೂ ಹೆದರದೆ ನಿಮ್ಮ ಗುರಿಯೆಡೆಗೆ ಹೆಜ್ಜೆಯಿಡಿ